ಮೂಲಂಗಿ (Radish ); ಉಷ್ಣ ಪದಾರ್ಥ ಆಗಿದೆ, ಆದಾಗ್ಯೂ ಇದನ್ನು ತಂಪು ಎಂದೇ ತಿಳಿಯಲಾಗಿದೆ. ಮೂಲಂಗಿಯ ಲಾಭಗಳಬಗ್ಗೆ ಗಮನಿಸಿದರೆ, ಒಳ್ಳೆಯ ಪೆಟೆಂಟ್ ಔಷಧಿಗಳು ಕೂಡ ಇದರ ಸರಿಸಮ ಆಗಲಾರವು. ಮೂಲವ್ಯಾಧಿ, ಅಂಡಕೋಶ, ಮೂತ್ರಾಂಗಹರಳು, ಕಾಮಾಲೆ, ಫೀಹ, ದಮ್ಮು ರೋಗಗಳಿಗೆ ಹಾಗೂ ಅನ್ನಾಶಯದ ದುರ್ಬಲತೆ, ಮೂತ್ರ ಮತ್ತು ಮಹಿಳೆಯರ ಮಾಸಿಕಸಾವ ತಡೆ ನಿವಾರಿಸಲು ಅತ್ಯುತ್ತಮವಾಗಿದೆ. ಮೂಲಂಗಿ ತನ್ನ ಜೊತೆಗಿನ ಆಹಾರವನ್ನು ಬೇಗ ಜೀರ್ಣವಾಗಿಸಿ ತಾನು ಮಾತ್ರ ತಡವಾಗಿ ಜೀರ್ಣವಾಗುತ್ತದೆ. ಆದರೆ ಮೂಲಂಗಿ ಎಲೆಗಳು ಮೂಲಂಗಿ ಗಡ್ಡೆಯನ್ನು ಬೇಗ ಜೀರ್ಣಪಡಿಸುತ್ತದೆ, ಅದಕ್ಕಾಗಿ ಮೂಲಂಗಿ ಗಡ್ಡೆ ತಿಂದ ನಂತರ ಮೂಲಂಗಿ ಎಲೆ ತಿನ್ನುವುದು ಉತ್ತಮ. ಮೂಲಂಗಿ ತಿಂದಮೇಲೆ ಬೆಲ್ಲ ತಿನ್ನಬೇಕು.ಮೂಲಂಗಿ ಸೇವನೆಯಿಂದ ಮಧುಮೇಹ ನಿವಾರಣೆಯಾಗುತ್ತದೆ.
ಅಧಿಕ ಮಾಂಸ ಸೇವನೆಯಿಂದ ಮೂತ್ರದಲ್ಲಿ ಯುರಿಕ್ ಎಸಿಡ್ ವೃದ್ಧಿಸಿ ಮೂತ್ರಜನಕಾಂಗ, ಅಂಡಕೋಶಗಳ ತೊಂದರೆಯಾಗುತ್ತದೆ, ಆಗ ಮೂಲಂಗಿ ಸೇವನೆ ಅತ್ಯುತ್ತಮ. ಮೂಲಂಗಿಯು ಮೂತ್ರ ಜನಕಾಂಗ, ಮೂತ್ರಕೋಶ ಮತ್ತು ಅಂಡಕೋಶಗಳನ್ನು ಸ್ವಚ್ಛಗೊಳಿಸುತ್ತದೆ. ಇದರ ಸೇವನೆಯಿಂದ ಶರೀರ ಮತ್ತು ಮುಖದ ಬಣ್ಣ ಕಾಂತಿಯುತವಾಗುತ್ತದೆ.
ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ ನಿಮಗೆ ಮೂಲಂಗಿ ಬೆಸ್ಟ್ ತರಕಾರಿಯಾಗಿದೆ
ಮೂಲಂಗಿಯಲ್ಲಿ ನಾರಿನ ಅಂಶ ಅಧಿಕವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ಕರುಳಿನಲ್ಲಿರುವ ತ್ಯಾಜ್ಯವನ್ನು ಹೊರ ಹಾಕುತ್ತದೆ. ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ. ಕರುಳಿನ ಹುಣ್ಣು ಮತ್ತು ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಮೂಲಂಗಿ ರಸ 20 ಮಿ.ಲಿ., ಆಕಳ ತುಪ್ಪ 20 ಗ್ರಾಂ ಬೆರೆಸಿ ಮುಂಜಾನೆ- ಸಂಜೆ ಸೇವಿಸಬೇಕು. ಮೂಲಂಗಿಯ ನಾಲ್ಕು ಹೋಳು ಮಾಡಿ ರಾತ್ರಿ ಉಪ್ಪು ಸವರಿಡಬೇಕು.ಮುಂಜಾನೆ ಆ ನಾಲ್ಕೂ ಹೋಳುಗಳು ತಿನ್ನಬೇಕು.
ಅಜೀರ್ಣ-ಆಮ್ಲ ಪಿತ್ತ ತಾಜಾ ಮೂಲಂಗಿ ಎಲೆಗಳನ್ನು ಉಪ್ಪುಹಚ್ಚಿ ಊಟ ದೊಂದಿಗೆ ತಿನ್ನುತ್ತಿದ್ದರೆ ಅಜೀರ್ಣತೆ ಬರುವುದಿಲ್ಲ. ಎಳೆಯ ಮೂಲಂಗಿ ಸಣ್ಣಗೆ ಹೋಳು ಮಾಡಿ ಸ್ವಲ್ಪ ಸಕ್ಕರೆ ಬೆರೆಸಿ ಊಟದೊಂದಿಗೆ ತಿನ್ನುತ್ತಿದ್ದರೆ ಆಮ್ಲಪಿತ್ತ ಆಗದು. ಮೂಲಂಗಿಯ ನಿಯಮಿತ ಸೇವನೆಯಿಂದ ಕಾಮಾಲೆ ರೋಗ ನಿವಾರಣೆಯಾಗುತ್ತದೆ.
ಮೂಲಂಗಿ ಕಂಡೊಡನೆ ಹಲವರು ಅದರ ವಾಸನೆಗೆ ಮೂಗು ಮುರಿದು ದೂರ ಇಡುತ್ತಾರೆ. ಆದರೆ ಬೆಳ್ಳಗಿರುವ ಈ ತರಕಾರಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಡಯೆಟ್‌ನಲ್ಲಿ ಇದನ್ನು ಬಳಸಿದರೆ ಸಿಗುವ ಫಲಿತಾಂಶದಿಂದ ಅಚ್ಚರಿಯಾಗುವುದು ಗ್ಯಾರೆಂಟಿ. ಮೂಲಂಗಿಯು ಚರ್ಮಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಮೂಲಂಗಿಯಲ್ಲಿರುವ ನೀರು ಚರ್ಮದಲ್ಲಿ ಆರೋಗ್ಯಕರ ತೇವಾಂಶ ಮಟ್ಟವನ್ನು ಎತ್ತಿಹಿಡಿಯಲು ಸಹಾಯ ಮಾಡುತ್ತದೆ. ಸ್ಮ್ಯಾಶ್ ಮಾಡಿದ ಬೇಯಿಸದ ಮೂಲಂಗಿ ಉತ್ತಮ ಕ್ಲೀನರ್ ಮತ್ತು ಪರಿಣಾಮಕಾರಿ ಫೇಸ್ ಪ್ಯಾಕ್ ಆಗಿ ಕಾರ್ಯನಿರ್ವಹಿಸುತ್ತದೆ.