ಪಪ್ಪಾಯಿ; ಉಷ್ಣ ಪದಾರ್ಥವಾಗಿದೆ. ಇದು ಹಸಿ ಮತ್ತು ಹಣ್ಣು ಎರಡನ್ನೂ ಸೇವಿಸಲಾಗುತ್ತದೆ. ಪಪ್ಪಾಯಿ ತರಕಾರಿ ಹಾಗೂ ಹಣ್ಣುಗಳಂತೆ ಉಪಯೋಗಿಸಲಾಗುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಯಕೃತ ಮತ್ತು ಕರುಳುಗಳಿಗೆ ಪುಷ್ಟಿ ಕೊಡುತ್ತದೆ. ಪ್ಲೇಹ ರೋಗ ನಿವಾರಿಸುತ್ತದೆ. ಯಾವಾಗಲೂ ಪಪ್ಪಾಯಿ ತಿನ್ನುವವರಿಗೆ ಕ್ಷಯ, ಕಣ್ಣಿನ ರೋಗ, ಅಜೀರ್ಣತೆ, ರಕ್ತ ಹೀನತೆ ಹತ್ತಿರ ಸುಳಿಯುವದಿಲ್ಲ. ಇದರ ರಸ ಸ್ತ್ರೀಯರ ಮಾಸಿಕ ಸ್ರಾವದ ಕೊರತೆ ನೀಗಿಸುತ್ತದೆ. ಇದು ಪಚನಾಂಗಗಳ ಎಲ್ಲ ರೋಗ ನಿವಾರಿಸುತ್ತದೆ ಮತ್ತು ಎಲ್ಲ ರೀತಿಯ ಜ್ವರಕ್ಕೂ ಉಪಯೋಗಿಯಾಗಿದೆ. ದಿನಾಲೂ ಪಪ್ಪಾಯಿ ಸೇವಿಸುವವರ ಅತಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ವಾಯು ಮಾಲಿನ್ಯ ರೋಗ: ವಾಹನಗಳಿಂದಾಗುವ ವಾಯು ಮಾಲಿನ್ಯಕ್ಕೆ ಜನ ಭಯಪಡುವ ಸಮಯ ಬಂದಿದೆ. ಪಪ್ಪಾಯಿಯ ಬೀಜಗಳನ್ನು ಕರವಸ್ತ್ರದಲ್ಲಿಟ್ಟು ಮೂಸಿ ನೋಡುತ್ತಿದ್ದರೆ, ವಾಯು ಮಾಲಿನ್ಯದ ವಿಷ ಪ್ರಭಾವ ಕಡಿಮೆಯಾಗುತ್ತದೆ. ಯಾವ ಸ್ಥಳಗಳಲ್ಲಿ ವಾಯು, ನೀರಿನ ವಿಷಕ್ತ ಪ್ರಭಾವವಿದೆಯೋ, ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆಯೋ ಅಲ್ಲಿ ದಿನಾಲೂ ಪಪ್ಪಾಯಿಯ ಉಪಯೋಗ ಮಾಡುತ್ತಿರಬೇಕು. ಇದರಿಂದ ವಿಷ ಪ್ರಭಾವಗಳಿಂದ ಮುಕ್ತವಾಗಬಹುದು. ನಗರಗಳಲ್ಲಿ ರಸ್ತೆಬದಿಯಲ್ಲಿ ಪಪ್ಪಾಯಿ ಗಿಡಗಳು ನೆಟ್ಟರೆ ಅಲ್ಲಿ ಪಾಯು ನೈರ್ಮಲ್ಯದ ಪ್ರಭಾವ ಕಡಿಮೆಯಾಗುವದು, ಏಕೆಂದರೆ ಪಪ್ಪಾಯಿಯ ವಾಯು ನೈರ್ಮಲ್ಯಕ್ಕೆ ಪ್ರಭಾವೀ ನಿರ್ವಹಣೆಯಾಗಿದೆ. ಸ್ತ್ರೀಯರ ಮಾಸಿಕ ತೊಂದರೆ: ಮಹಿಳೆಯರ ಮಾಸಿಕ ತೊಂದರೆ ಇದ್ದರೆ ಅದಕ್ಕೆ
– ಪಪ್ಪಾಯಿಯ ಬೀಜ ಒಣಗಿಸಿ ಚೂರ್ಣ ಮಾಡಿ ಒಂದು ಗ್ರಾಂ ಚೂರ್ಣ ಮುಂಜಾನೆ-ಸಂಜೆ ಬಿಸಿ ನೀರಿನೊಂದಿಗೆ ಸೇವಿಸಿದರೆ ತೊಂದರೆ ನಿವಾರಣೆಯಾಗುತ್ತದೆ,
ಮುಖದ ಸುಕ್ಕು-ಚರ್ಮ ರೋಗ: ಹಸಿ ಪಪ್ಪಾಯಿಯನ್ನು ನುಣ್ಣಗೆ ಕುಟ್ಟಿ ಅದನ್ನು – ಒಂದು ಚಮಚದಷ್ಟು ಮುಖ್ಯಕ್ಕೆ, ಕೊರಳಿಗೆ ಲೇಪಿಸಿ ಅರ್ಧ ಗಂಟೆಯ ನಂತರ ಸ್ವಲ್ಪ ಬಿಸಿ ನೀರಿನಿಂದ ತೊಳೆಯಬೇಕು. ತುರಿಕೆ, ತದ್ದು ಇತ್ಯಾದಿ ಚರ್ಮ ರೋಗಕ್ಕೆ ಒಂದು ಚಮಚದಷ್ಟು ಪಪ್ಪಾಯಿ ಹಾಲು, ನಾಲ್ಕು ಚಮಚ ಎಳ್ಳೆಣ್ಣೆ ಬೆರೆಸಿ ಹಚ್ಚಬೇಕು. ಸೌಂದರ್ಯ ವೃದ್ಧಿ: ದಿನಾಲೂ ಒಂದು ತಿಂಗಳ ವರೆಗೆ ಖಾಲಿ ಹೊಟ್ಟೆಯಲ್ಲಿ 2-3 ಹೋಳು ಪಪ್ಪಾಯಿ ತಿನ್ನಬೇಕು, ಜೊತೆಗೆ ಒಂದು ಹೋಳು ಮುಖಕ್ಕೆ
ಲೇಪಿಸಬೇಕು. ಇದರಿಂದ ತ್ವಚೆ ಗುಲಾಬಿ ಹೂವಿನಂತೆ ಹೊಳೆಯುತ್ತದೆ. ರಕ್ತ ಹೀನತೆ: ಹಣ್ಣಾದ ತಾಜಾ ಪಪ್ಪಾಯಿ 10-15 ದಿನಗಳವರೆಗೆ ತಿನ್ನುವದರಿಂದ ರಕ್ತಾಲ್ಪತೆ ದೂರವಾಗುತ್ತದೆ ಮತ್ತು ಸ್ತ್ರೀಯರ ಅನೇಕ ತೊಂದರೆಗಳು ದೂರವಾಗುತ್ತವೆ. ಪಪ್ಪಾಯಿಯ ರಸ ಸೇವನೆಯಿಂದ ಕಾಮಾಲೆ ರೋಗ ನಿವಾರಣೆಯಾಗುತ್ತದೆ. ಯಕೃತ,ಪ್ಲೀಹ ಮತ್ತು ಉದರ ತೊಂದರೆ: ಒಣಗಿಸಿ ಉಪ್ಪು ಸವರಿದ ಪಪ್ಪಾಯಿ ಸೇವನೆಯಿಂದ ಯಕೃತ, ಫೀಹ ಮತ್ತು ಉದರದ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಪಪ್ಪಾಯಿಯ ಸೇವನೆಯಿಂದ ಶರೀರದ ತೂಕ ಹೆಚ್ಚುತ್ತದೆ. ಪಪ್ಪಾಯಿ ಸೇವನೆಯಿಂದ ರಕ್ತಮೂಲವ್ಯಾಧಿ, ಮೊಳಕೆಗಳಿಗೆ ಶಮನಕಾರಿ ಯಾಗಿದೆ.
ಮಕ್ಕಳ ಯಕೃತ ರೋಗಕ್ಕೆ 5-6 ಹನಿ ಪಪ್ಪಾಯಿ ರಸದಲ್ಲಿ ಸ್ವಲ್ಪ ಸಕ್ಕರೆ ಬೆರೆಸಿ ಕೊಡಬೇಕು. ಇದರಿಂದ ಸ್ತ್ರೀಯರಿಗೆ ಹಾಲು ಹೆಚ್ಚುತ್ತದೆ.