ಸೇಬು ಮತ್ತು ಸೇಬಿನ ರಸ ಎರಡೂ ಮನುಷ್ಯರಿಗೆ ಅತ್ಯುಪಯುಕ್ತವಾಗಿವೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವದರಿಂದ ಹಸಿವು ಹೆಚ್ಚುತ್ತದೆ, ಮಲಬದ್ಧತ ವದಿಲ್ಲ. ಮೆದುಳು ರೋಗಕ್ಕೆ ಇದು ಅತುತ್ತಮ ಔಷಧಿಯಾಗಿದೆ, ಏಕೆಂದರೆ ಇದರಲ್ಲಿ ‘ಪಾಸ್ಪರಸ್, ಅಂಶ ಬೇರೆ ತರಕಾರಿ-ಹಣ್ಣುಗಳಿಗಿಂತ ಅಧಿಕ ಪ್ರಮಾಣದಲ್ಲಿರುತ್ತದೆ. ಸೇಬಿನ ಸೇವನೆಯಿಂದ ಶರೀರ ಸದೃಢವಾಗುತ್ತದೆ.
ಸೇಬಿನಮೇಲಿನ ಸಿಪ್ಪೆ ತೆಗೆದರೆ ಇದರ ಅತ್ಯಮೂಲ್ಯ ಭಾಗ ತೆಗೆದಂತಾಗುತ್ತದೆ. ಸೇಬಿನ ಸಿಪ್ಪೆಯಲ್ಲಿ ಅತ್ಯಧಿಕ ಪ್ರಮಾಣದ ಜೀವಸತ್ವವಿರುತ್ತದೆ. ವೃದ್ಧರಿಗೆ, ದುರ್ಬಲರಿಗೆ ಸಿಪ್ಪೆಯಿಂದ ಮಾಡಿದ ಚಹಾ ಬಹಳ ಪ್ರಯೋಜನಕಾರಿಯಾಗಿದೆ. ಈ ಚಹಾದಲ್ಲಿ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಜೇನು ಬೆರೆಸಿದರೆ ಇನ್ನೂ ಹೆಚ್ಚು ಪ್ರಯೋಜನಕಾರಿ, ಸೇಬಿನ ಸೇವನ ಅನ್ನಾಶಯ, ಕರುಳುಗಳಿಗೆ ಅತ್ಯುಪಯೋಗಿಯಾಗಿದೆ, ವಿಷಮ ಜ್ವರ, ಮಲಬದ್ಧತೆ ನಿವಾರಿಸುತ್ತದೆ. ಸೇಬು ಮಾನಸಿಕ ಶಕ್ತಿ ಒದಗಿಸುತ್ತದೆ, ಶುದ್ಧ ರಕ್ತ ಉತ್ಪಾದಿಸುತ್ತದೆ, ಹೃದಯಕ್ಕೂ ಉತ್ತಮ. ಶರೀರದ ಕಾಂತಿ ಹೆಚ್ಚುತ್ತದೆ. ವಿಶೇಷವಾಗಿ ಮಹಿಳೆಯರು ಹೆಚ್ಚು ಸೇವಿಸಬೇಕು ಇದರಿಂದ ಅವರು ಅನೇಕ ರೋಗಗಳಿಂದ ರಕ್ಷಿಸಿಕೊಳ್ಳಬಹುದು. ಮಕ್ಕಳಿಗೆ ಸೇಬಿನ ರಸ ಕೊಡುವದರಿಂದ ಆರೋಗ್ಯ ವೃದ್ಧಿಸುತ್ತದೆ, ಸುರಕ್ಷಿತವಾಗಿ ಕಲ್ಲು ಹೊರಬರುತ್ತವೆ, ಒಸಡಿನ ನೋವು ಕಡಿಮೆಯಾಗುತ್ತದೆ.
ಗುದ ಮೊಳಕೆ: ಹುಳಿ ಸೇಬಿನ ರಸ ಮೊಳಕೆಗೆ ಲೇಪಿಸಿದರೆ ಮೊಳಕೆ ಬೇರುಸಹಿತ ನಾಶ ಹೊಂದುತ್ತದೆ.
ಮಲಬದ್ಧತೆ: ಸಾಮಾನ್ಯವಾಗಿ ಮಕ್ಕಳಿಗೆ ಆಹಾರದ ಭಿನ್ನತೆಯಿಂದ ಮಲಬದ್ಧತೆಯಾಗುತ್ತದೆ, ಆಗ ಒಂದು ಹಣ್ಣಾದ ಸೇಬು ಚಿಮಟಿಯಿಂದ ಹಿಡಿದು ಬೆಂಕಿಯಮೇಲೆ ಬಿಸಿ ಮಾಡಿ, ನಂತರ ತಿಕ್ಕಿ ಮೆದುಮಾಡಿ ಮಕ್ಕಳಿಗೆ ತಿನ್ನಲು ಕೊಡಬೇಕು. ಇದರಿಂದ ಬೇಗ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಕರುಳಿಗೆ ಪುಷ್ಟಿ ದೊರೆಯುತ್ತದೆ.
ಶರೀರ ಪುಷ್ಟಿ : ಒಂದು ಸಿಹಿಸೇಬು ಕೊಯ್ದು ಹೋಳುಮಾಡಿ ಒಂದು ಕಾಜಿನ ಪಾತ್ರೆಯಲ್ಲಿ ಇಡಿರಾತ್ರಿ ಚಂದ್ರನ ಬೆಳದಿಂಗಳಲ್ಲಿ ಚಂದ್ರನ ಬೆಳಕು ಅದರ ಮೇಲೆ ಬೀಳುವಂತೆ ಇಟ್ಟು, ಮುಂಜಾನೆ ಮುಖತೊಳೆದು ಎಲ್ಲ ಹೋಳುಗಳು ತಿನ್ನಬೇಕು. ಇದರಿಂದ ಶರೀರಕ್ಕೆ ಪುಷ್ಟಿ ದೊರೆಯುತ್ತದೆ.
ಕರುಳು ಗಾಯ: ಸೇಬಿನ ರಸ ಸೇವಿಸುವದರಿಂದ ಅನ್ನಾಶಯ ಹಾಗೂ ಕರುಳುಗಳಲ್ಲಾದ ಗಾಯ ಗುಣವಾಗುತ್ತದೆ.
ನೈಸರ್ಗಿಕ ಪೌಷ್ಟಿಕ: ದಿನಾಲೂ 2-3 ಸೇಬುಹಣ್ಣು ತಿಂದು ಹಾಲು ಕುಡಿದರೆ 1-2 ತಿಂಗಳಲ್ಲಿಯೇ ಆರೋಗ್ಯ ವೃದ್ಧಿಸುತ್ತದೆ. ಚರ್ಮದ ಕಾಂತಿ, ಹೊಳಪು
ಹೆಚ್ಚುತ್ತದೆ. ಎಲ್ಲ ದುರ್ಬಲತ ನಿವಾರಣೆಯಾಗುತ್ತದೆ. ಸೇಬಿನ ಸೇವನೆಯಷ್ಟು ಪ್ರಯೋಜನ ಬೇರಾವ ಔಷಧಿಗಳಿಂದಾಗದು.
ಕ್ರಿಮಿ ರೋಗ; ರಾತ್ರಿ ಮಲಗುವಾಗ 1-2 ಸೇಬು ತಿಂದು ನೀರು ಕುಡಿಯದೆ ಮಲಗಬೇಕು. ಈ ರೀತಿ 4-5 ದಿನ ಮಾಡಿದಲ್ಲಿ ಎಲ್ಲ ಉದರಕ್ರಿಮಿ ನಾಶಹೊಂದುತ್ತವೆ.
ಲಾಭದಾಯಕ ಚಹಾ: ಸೇಬಿನ ಸಿಪ್ಪೆಯಿಂದ ಮಾಡಿದ ಚಹಾ ಬಹಳ ಸ್ವಾದಿಷ್ಟ ಹಾನಿರಹಿತ ಆರೋಗ್ಯವರ್ಧಕವಾಗಿರುತ್ತದೆ. ವಿಶೇಷವಾಗಿ ವೃದ್ಧರಿಗೆ ಹಾಗೂ ಆಶಕ್ತರಿಗೆ ಇದರ ಶಕ್ತಿವರ್ಧಕ ಪ್ರಭಾವ ಉತ್ತಮವಾಗಿದೆ. ಇದು ವಿಶ್ವ ಪ್ರಸಿದ್ಧ ಪಾನೀಯ `ಓವಲ್ಲಿನ’ ಹಾಗೆ ಕಾರ್ಯ ಮಾಡುತ್ತದೆ.