ಹಸಿರು ತರಕಾರಿ ; ಸೇವನೆ ಆರೋಗ್ಯದ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದೆ, ಆದರೆ ಹಣ್ಣು-ತರಕಾರಿಗಳನ್ನು ಚನ್ನಾಗಿ ತೊಳೆಯದೆ ಉಪಯೋಗಿಸಿದರೆ “ನರ ವ್ಯವಸ್ಥೆ”ಯ ಮೇಲೆ ಸೋಂಕು ಬರುವ ಸಂಭವವಿರುತ್ತದೆ.
ಈ ರೋಗ ಹಂದಿಗಳಲ್ಲಿರುವ ‘ಟೆನಿಮಾಸೋಲಿಯಮ್ ಕ್ರಿಮಿಗಳಿಂದ ಬರುತ್ತದೆ.
ತರಕಾರಿಗಾಗಿ ಕೆಂಪು, ತಾಜಾ ಟೊಮೆಟೊ ಹಣ್ಣು ತೆಗೆದುಕೊಳ್ಳಬೇಕು, ಹಸಿರು ಅಥವಾ ಹಳದಿ ವರ್ಣದ ಟೊಮೆಟೊ ಸೇವಿಸಕೂಡದು.
ಕಾಲರಾ ಅವಧಿಯಲ್ಲಿ ಮತ್ತು ಅತಿ ಉಷ್ಣ ಕಾಲದಲ್ಲಿ ಅಧಿಕ ಕರಬೂಜ ಸೇವನೆ ಮಾಡಕೂಡದು, ಮತ್ತು ಅತಿ ಉಷ್ಣ ಪದಾರ್ಥಗಳನ್ನು ಸೇವಿಸಕೂಡದು, ಅದರಿಂದ ಉದರ, ಕರುಳು ಹಾಗೂ ಕಣ್ಣುಗಳಿಗೆ ಹಾನಿಯಾಗಬಹುದು.
ಹೆಚ್ಚು ಮಾವಿನ ಹಣ್ಣು ಸೇವನೆಯಿಂದ ಅಜೀರ್ಣತೆಯಾದರೆ ಜಾಮೂನು( ನೇರಳೆ ) ಹಣ್ಣು ಸೇವಿಸಬೇಕು.
ಅಧಿಕದ್ರಾಕ್ಷಿ ತಿನ್ನುವದರಿಂದ ಉದರದಲ್ಲಿ ಹಿಡಿದಂತೆ, ಶಬ್ದವಾಗುತ್ತಿದ್ದರೆ ಸ್ವಲ್ಪ ಸೋಂಪು ಮೆಲಿಯಬೇಕು. ಅತಿಯಾದ ಬಾಳೆ ಹಣ್ಣು ತಿಂದು ಉದರದಲ್ಲಿ ಚುಚ್ಚಿದಂತೆ ನೋವು ಬರುತ್ತಿದ್ದರೆ ಇಲಾಯಚಿ ಮೆಲಿಯಬೇಕು ನೋವು ಬೇಗ ನಿವಾರಣೆಯಾಗುತ್ತದೆ.
ಹೆಚ್ಚು ಖರಬೂಜ ತಿಂದು ಮೇಲೆ ಸ್ವಲ್ಪ ಜೇನು ನೆಕ್ಕಲು ಉದರದ
ಅಜೀರ್ಣತೆ, ಉದರದಲ್ಲಿಯ ಶಬ್ದ ಬರುವದು ಕಡಿಮೆಯಾಗುತ್ತದೆ.
ನೇರಳೆ ಹೆಚ್ಚು ತಿನ್ನುವದರಿಂದ ಅಜೀರ್ಣತೆ, ಉದರ ಭಾರವೆನಿಸುವದು
ಅಗುತ್ತಿದ್ದರೆ ಆಗ ಸ್ವಲ್ಪ ಉಪ್ಪು ನೆಕ್ಕಬೇಕು.
ಅಧಿಕ ಪಪ್ಪಾಯಿ ತಿನ್ನುವದರಿಂದ ತೊಂದರೆಯಾದರೆ ಮೇಲೆ ಸಕ್ಕರೆ ತಿನ್ನಬೇಕು.
ಸೀತಾಫಲದ ಬೀಜಗಳಲ್ಲಿ ಒಂದು ರೀತಿಯ ಎಣ್ಣೆಯ ಅಂಶವಿರುತ್ತದೆ. ಇದು ವಿಷಯುಕ್ತವಾಗಿರುತ್ತದೆ. ಇದರ ಚೂರ್ಣ ಕಣ್ಣಿನಲ್ಲಿ ಬಿದ್ದರೆ ಕಣ್ಣುಗಳು ಉರಿಯುತ್ತವೆ, ಇದು ಕಣ್ಣುಗಳಿಗೆ ಬಹಳ ಹಾನಿಕಾರಕವಾಗಿದೆ. ಹೇನುಗಳಿಗಾಗಿ ಚೂರ್ಣವನ್ನು ತಲೆಗೆ ಹಚ್ಚುವಾಗ ಕಣ್ಣು ಮುಚ್ಚಿಕೊಳ್ಳಬೇಕು, ಹಾಗೂ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.