ಮನೆ ಮದ್ದು ಅಮೃತ ಬಳ್ಳಿಯಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ….?

ArogyaVijaya Kannada
2 Min Read

ಅಮೃತಬಳ್ಳಿ ,  ಇದರ ಸಸ್ಯಶಾಸ್ತ್ರೀಯ ಹೆಸರು ಟಿನೋಸ್ಪೊರಾ ಕಾರ್ಡಿಫೋಲಿಯಾ (Tinospora cardifolia). ಇದು ಮೆನೆಸ್ಟರ್ಮಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದೆ. ಬೂದುಮಿಶ್ರಿತ ಕಂದು ಬಣ್ಣದ ತೊಗಟೆ ಹೊಂದಿರುವ ಇದು ನಾಲಗೆಗೆ ಒಗರು ಒಗರಾಗಿದ್ದರೂ, ಜ್ವರ, ಚರ್ಮವ್ಯಾಧಿ, ರಕ್ತಹೀನತೆಗಳನ್ನು ಹೋಗಲಾಡಿಸಬಹುದು. ಮೂಲವ್ಯಾಧಿ ಪೀಡಿತರು ಇದರ ಬಳ್ಳಿಗಳನ್ನು ಜಜ್ಜಿ ರಸ ತೆಗೆದು ಮಜ್ಜಿಗೆಯೊಂದಿಗೆ ಕುಡಿಯಬೇಕು. ಕಾಮಾಲೆ, ಮಧುಮೇಹಿಗಳಿಗೂ ಇದರ ಬಳ್ಳಿಗಳ ರಸ, ತೊಗಟೆಯಿಂದಾದ ಕಷಾಯ ಒಳ್ಳೆಯದು.

ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ವಿಪುಲವಾಗಿ
ಬೆಳೆಯಬಲ್ಲ ಅಮೃತಬಳ್ಳಿ ಎಂತಹ ಹವಾಗುಣಕ್ಕೂ ಹೊಂದಿ ಕೊಳ್ಳುವ ತಾಕತ್ತಿದೆ. ಕರ್ನಾಟಕದಾದ್ಯಂತ ಇದು ನೈಸರ್ಗಿಕವಾಗಿಯೇ ಬೆಳೆಯುತ್ತದೆ. ಗೋಡುಮಣ್ಣು, ಸಾವಯವ ಅಂಶಗಳುಳ್ಳ ಮಣ್ಣಿನಲ್ಲಿ ಇದು ಸೊಗಸಾಗಿ ಬೆಳೆಯುತ್ತದೆ.

ಅಮೃತಬಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಬಳ್ಳಿಗಳಲ್ಲಿ ಬೆಳೆಯುತ್ತವೆ. ಬೀಜಗಳಿಗೆ ಮೊಳಕೆ ಒಡೆಯುವ ಸಾಮರ್ಥ್ಯ ಕಡಿಮೆ ಇರುತ್ತದಾದ್ದರಿಂದ, ಕಾಂಡವನ್ನು ಆರಿಸಿ ನಾಟಿಗೆ ಬಳಸುವುದು ಲಾಭದಾಯಕ. ಕಿರುಬೆರಳಗಾತ್ರದ ಆರು ಅಂಗುಲಗಳಷ್ಟು ಉದ್ದದ ಕಾಂಡವನ್ನು ಕುಂಡಗಳ ಮಿಶ್ರಣ ತುಂಬಿರುವ ಪಾಲಿಥಿನ್‌ ಚೀಲಗಳಲ್ಲಿ ನಾಟಿ ಮಾಡಬೇಕು. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭೂಮಿಯನ್ನು ಹದಗೊಳಿಸಿ ಒಂದು ಅಡಿ ಆಳ ತೆಗೆದ ಗುಂಡಿಗಳಲ್ಲಿ ಬೇರು ಬಿಟ್ಟು ಬೆಳೆದ ತುಂಡುಗಳನ್ನು ನಾಟಿ ಮಾಡಿ, ತಕ್ಷಣವೇ ನೀರು ಪೂರೈಯಿಸಬೇಕು. ಮೊದಲವಾರ ಪ್ರತಿದಿನವೂ ನೀರು ಪೂರೈಸುತ್ತಾ ಆ ನಂತರ ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕಾಗುತ್ತದೆ.

ಒಂದೂವರೆ ಎರಡು ತಿಂಗಳುಗಳಲ್ಲಿ ಪಾತಿಯಲ್ಲಿ ಬೆಳೆಯುವ ಕಳೆಗಳನ್ನು ಕೀಳಬೇಕು. ಇಲ್ಲವಾದರೆ ಬೆಳವಣಿಗೆ ಕುಂಠಿತವಾಗುತ್ತದೆ. The nectar vineಯನ್ನು ಮರಗಳಿಗೆ ಹಬ್ಬಿಸುವುದರಿಂದ ಸಹಜ ಆಸರೆ ಸಿಗುತ್ತದೆ. ಕಬ್ಬಿಣದ ಸಲಾಕೆಗಳಿಗೂ ಹಬ್ಬಿಸಬಹುದು.

ಇದಕ್ಕೆ ಶಿಲೀಂಧ್ರ ರೋಗ ತಗುಲಿದಲ್ಲಿ ಬೇವಿನ ಎಲೆಗಳ ಕಷಾಯದಿಂದ ಉಪಚರಿಸಬೇಕು. ಕುದಿಯುವ ನೀರಿಗೆ ಅಕ್ಕಿ ಹಿಟ್ಟು ಬೆರೆಸಿ, ಆರಿಸಿ 0.2% ನುವಾಕ್ರಾನ್ ಕ್ರಿಮಿನಾಶಕ ಬೆರೆಸಿ ಸಿಂಪಡಿಸ ಬಹುದು.

ಮೊದಲ ಕೊಯ್ತು 3-4 ತಿಂಗಳ ಬಳಿಕ ಮಾಡಬೇಕು. ನಂತರ 2 ತಿಂಗಳಿಗೆ ಒಮ್ಮೆ ಇಳುವರಿ ದೊರೆಯುತ್ತದೆ. ಬಳ್ಳಿಯ ಕಾಂಡ ಘಾಸಿಗೊಳ್ಳದಂತೆ ಕೊಯ್ದು ಮಾಡಿ, ಎಲೆಗಳನ್ನು ಸ್ವಚ್ಛ ನೆಲದ ಮೇಲೆ 7-8 ದಿನಗಳ ಕಾಲ ಒಣಗಿಸಿ ಪಾಲಿಥಿನ್ ಚೀಲಗಳಲ್ಲಿ ಸಂಗ್ರಹಿಸಿ ಇಡುತ್ತಾರೆ. ಆಯುರ್ವೇದದಲ್ಲಿ ಅಮೃತಬಳ್ಳಿಯ ಕಾಂಡವೂ ಉಪಯುಕ್ತವೇ. ವಾರ್ಷಿಕ ಇಳುವರಿ-ವರ್ಷಕ್ಕೆ 3-5 ಟನ್ ಒಣಎಲೆಗಳು ಮತ್ತು ಸುಮಾರು 1 ಟನ್ ಒಣಗಿದ ಕಾಂಡ ದೊರೆಯುತ್ತದೆ.

Share this Article
Leave a comment

Leave a Reply

Your email address will not be published. Required fields are marked *