ದಾವಣಗೆರೆ: ರಾಷ್ಟ್ರೀಯ ರೋಗವಾಹಕ ರೋಗಗಳ ನಿಯಂರ್ತಣ ಕಾರ್ಯಕ್ರಮದ ಅನ್ವಯ ಮಾರ್ಗಸೂಚಿಯಂತೆ, ವಿವಿಧ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ಸಾರ್ವಜನಿಕವಾಗಿ ಮೂಡಿಸುವ ಸಲುವಾಗಿ ಆರೋಗ್ಯ ಕುಟುಂಬ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2023 ರ ಸಾಲಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುತ್ತದೆ.
ಡೆಂಗೀ ನಿಯಂತ್ರಣದಲ್ಲಿ ರೋಗ ಪ್ರಸರಣ ಅವಧಿಯ ಮುನ್ನವೆ, ಸಮುದಾಯವನ್ನು ಸಜ್ಜುಗೊಳಿಸುವಿಕೆ ಹಾಗೂ ಡೆಂಗೀ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ವಿಶೇಷವಾಗಿ ಡೆಂಗಿ ರೋಗದ ಮಾಹಿತಿಯನ್ನೊಳಗೊಂಡ ಡೆಂಗಿ ರಥ ವಾಹನವನ್ನು ಸಜ್ಜುಗೊಳಿಸಿದ್ದು ಆಗಸ್ಟ್ 15, 2023 ರಿಂದ ಸೆಪ್ಟಂಬರ್ 14, 2023 ವರೆಗೆ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ ಸಾರ್ವಜನಿಕರಲ್ಲಿ ಆಡಿಯೋ ಮತ್ತು ಫಲಕ ಪರ್ದಶನದೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಈ ವಾಹನವು ಜಿಲ್ಲೆಯಾದ್ಯಂತ ಸಂಚರಿಸಿ ಧ್ವನಿವರ್ಧಕದ ಮೂಲಕ ಜಾಗೃತಿ ಗೀತೆಗಳನ್ನು & ಪ್ರದರ್ಶನ ಫಲಕಗಳ ಮೂಲಕ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು.ಸದರಿ ಡೆಂಗೀ ವಾಹನವು ಡೆಂಗೀ ಪ್ರಕರಣಗಳು ಬಂದಿರುವ ಹಳ್ಳಿ ನಗರ/ಪಟ್ಟಣ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಾರ್ವಜನಿಕರು ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಆಡಿಯೋ & ಪ್ರದರ್ಶನ ಫಲಕಗಳ ಮೂಲಕ ಜಾಗೃತಿ ಮೂಡಿಸುತ್ತಿದೆ.
ಡೆಂಗೀ ರೋಗದ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
- ಡೆಂಗೀ ರೋಗವು ಸಾಂಕ್ರಾಮಿಕ ರೋಗವಾಗಿದ್ದು ಈಡೀಸ್ ಇಜಿಪ್ಲೈ ಎನ್ನುವ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆಯಾವುದೇ ನಿಖರ ಚಿಕಿತ್ಸೆ ಇಲ್ಲದ ಡೆಂಗೀ ರೋಗವು ನಿರ್ಲಕ್ಷೆ ಮಾಡಿದಲ್ಲಿ ಮಾರಣಾಂತಿಕವಾಗಬಹುದು
- ಮನೆಯ ಒಳಗೆ/ ಹೊರಗೆ ಸಂಗ್ರಹಿಸಿರುವ ನೀರಿನ ಸಂಗ್ರಹಗಳಲ್ಲಿ ಮನೆಯ ಪರಿಸರದಲ್ಲಿ ಸಂಗ್ರಹವಾಗಿರುವ ಘನತ್ಯಾಜ್ಯ ವಸ್ತುಗಳಲ್ಲಿ ಮೊಟ್ಟೆ ಇಟ್ಟು ಯಥೇಚ್ಚವಾಗಿ ಬೆಳವಣಿಗೆ ಆಗುತ್ತವೆಯಾವುದೇ ನಿಖರ ಚಿಕಿತ್ಸೆ ಇಲ್ಲದೆ ಡೆಂಗೀ ರೋಗದ ನಿಯಂತ್ರಣಕ್ಕೆ ಮೇಲೆ ತಿಳಿಸಿದ ನೀರಿನ ಸಂಗ್ರಹಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತಿಕ್ಕಿ ತೊಳೆದು ಒಣಗಿಸಿ ನೀರು ತುಂಬುವುದು & ಮನೆಯ ಪರಿಸರದಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತೆ ನೋಡಿಕೊಳ್ಳುವುದೇ ಪ್ರಮುಖ ನಿಯಂತ್ರಣ ವಿಧಾನವಾಗಿರುತ್ತದೆ
- ಬೇರೆ ಬೇರೆ ಇಲಾಖೆಗಳ ಸಹಭಾಗಿತ್ವದಡಿಯಲ್ಲಿ ಜೂನ್ & ಜುಲೈ ತಿಂಗಳಲ್ಲಿ ಗ್ರಾ, ಪಂಚಾಯತಿ ಪಿ.ಡಿ.ಓ. & ಜಿಲ್ಲೆಯ ಎಲ್ಲಾ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಪಿ.ಪಿ.ಟಿ, ಮೂಲಕ ಮಾಹಿತಿ ನೀಡಲಾಗಿದ್ದು, ಅವರ ಮೂಲಕ ವಿದ್ಯಾರ್ಥಿಗಳಿಗೆ ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ಸೊಳ್ಳೆ ನಿಯಂತ್ರಣ ಕ್ರಮಗಳ ಬಗ್ಗೆ, ಮಾದರಿ ತಯಾರಿಸುವುದು & ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.
- ಆರೋಗ್ಯ ಸಿಬ್ಬಂದಿ /ಆಶಾ ಸ್ವಯಂಸೇವಕರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ನಿತ್ಯವು ಮನೆ ಮನೆ ಭೇಟಿ ನೀಡಿ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣ ಸಮೀಕ್ಷೆ ಹಾಗೂ ನಾಶಪಡಿಸುವ ಚಟುವಟಿಕೆಯನ್ನು ಕೈಗೊಂಡಿದ್ದಾರೆ.
- ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಸ್ವಯಂ ಸೇವಕರು ಮನೆ ಭೇಟಿ ಸಂದರ್ಭದಲ್ಲಿ ಡೆಂಗೀ ನಿಯಂತ್ರಣ ಕುರಿತು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು.
- ಡೆಂಗೀ ರೋಗ ಹರಡುವಂಥ ಈಡೀಸ್ ಸೊಳ್ಳೆ ಮನೆಯ ಪರಿಸರದಲ್ಲೇ ಉತ್ಪತ್ತಿಯಾಗುವುದರಿಂದ ಸಾರ್ವಜನಿಕರು ಜಾಗೃತಿಯಿಂದ ಇರುವುದರ ಜೊತೆಗೆ ಸೊಳ್ಳೆ ಲಾರ್ವಾಗಳು(ಬಾಲಹುಳು) ಬೆಳೆಯದಂತೆ ನಿಗಾವಹಿಸುವುದು ಅವಶ್ಯವಿರುತ್ತದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ ನಾಗರಾಜ್ ಹಾಗು ಜಿಲ್ಲಾ ವಿಬಿಡಿ ನಿಯಂತ್ರಣಾಧಿಕಾರಿಗಳಾದ ಡಾ ನಟರಾಜ್ ಪ್ರಕಟಣೆ ನೀಡಿರುತ್ತಾರೆ