Arogya Vijya | Kannada Health Tips | 30-07-2023
ದಾವಣಗೆರೆ ಜಿಲ್ಲೆಯಲ್ಲಿ ಮಕ್ಕಳಿಗೆ ದಿನೇ ದಿನೇ ಕಣ್ಣೀನ ಬೇನೆ ಹೆಚ್ಚಾಗುತ್ತಿದೆ. ಮದ್ರಾಸ್ ಐ ಮಾದರಿಯಲ್ಲಿ ಹೊಸ ಗುಣಲಕ್ಷಣದ ಕಾಯಿಲೆ ಮಕ್ಕಳನ್ನು ಬಾಧಿಸುತ್ತಿದೆ.
ದಾವಣಗೆರೆ ನಗರವೊಂದರಲ್ಲೇ 1000 ಕ್ಕೂ ಹೆಚ್ಚು ಮಕ್ಕಳು ಕಣ್ಣು ಬಾಧೆಯಿಂದ ಬಳಲುತ್ತಿದ್ದಾರೆ. ಮೊದ ಮೊದಲು ಇದು ಮದ್ರಾಸ್ ಐ ಅಂತಾನೇ ಭಾವಿಸಿದ್ರು. ಕಣ್ಣಿನ ಭಾವು, ತುರಿಕೆ ಹೆಚ್ಚಾದ ಮೇಲೆ ನೇತ್ರ ತಜ್ಞರ ಬಳಿ ಪರೀಕ್ಷೆ ಮಾಡಿಸಿದ ಬಳಿಕ ಇದು ಹೊಸ ವೈರಸ್ ಅಂತ ಕಂಡು ಬಂದಿದೆ.
ಹೊಸ ಐ ವೈರಸ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಪೊಷಕರು ಅಂತಂಕಗೊಂಡಿದ್ದು, ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತಿದ್ದು, ಮಕ್ಕಳಿಂದ ದೊಡ್ಡವರಿಗೂ ಕೂಡ ಹರಡುತ್ತದೆ.. ಇದು ಬಹು ಬೇಗನೆ ಹರಡುವ ವೈರಸ್ ಆಗಿದ್ದು, ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಶೀಘ್ರವಾಗಿ ಹರಡುತ್ತಿದೆ.
ಶಾಲೆಗಳಲ್ಲಿ ಮಕ್ಕಳು ಜೊತೆಲೀ ಕೂರುವುದು, ಆಟ ಆಡುವುದು ಒಬ್ಬರ ಕೈ ಒಬ್ಬರು ಮುಟ್ಟಿ ಕಣ್ಣು ಉಜ್ಜಿಕೊಳ್ಳುವುದರಿಂದ ವೈರಸ್ ಬೇಗ ಹರಡುತ್ತಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಐ ವೈರಸ್ ಕಾಣಿಸಿಕೊಂಡ ಮಕ್ಕಳಿಗೆ ಒಂದು ವಾರ ಶಾಲೆಗೆ ಬಾರಂದೆ ಸೂಚನೆ ನೀಡಿದ್ದಾರೆ.
ಇದು ಒಮ್ಮೆ ಅಟ್ಯಾಕ್ ಆದರೆ 3 ರಿಂದ 5 ದಿನ ಇರತ್ತೆ. ಇದು ಗುಣ ಆಗುವಂತಹ ಕಾಯಿಲೆಯಾಗಿದ್ದು, ಪಾಲಕರು ಆತಂಕ ಪಡಬೇಕಿಲ್ಲ.. ಈ ಕಾಲದಲ್ಲಿ ಸಾಮಾನ್ಯವಾಗಿ ಬರುವ ವೈರಸ್ ಇದರಿಂದ ತೊಂದರೆ ಇಲ್ಲ ಹಾಗಂತ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದಿದ್ದಾರೆ ವೈದ್ಯರು.
-ಡಾ.ರವೀಂದ್ರ, ವೈದ್ಯ, ದೃಷ್ಟಿ ಕಣ್ಣಿನ ಆಸ್ಪತ್ರೆ