ಹಾಲಿಗಿಂತ ಮಿಗಿಲಾದ ಪಾನೀಯ ಇಲ್ಲ
ಹುಟ್ಟಿದಾಗ ನಮ್ಮ ಗಂಟಲ ದಾಹವನ್ನು ಇಂಗಿಸೋದು ತಾಯಿ ಹಾಲು ಮಾತ್ರ . ಬೆಳೆಯುತ್ತಿರುವ ಹಾಗೆ ಹಸುವಿನ ಹಾಲು ,ಎಮ್ಮೆಯ ಹಾಲನ್ನು ಕುಡಿಸುತ್ತೇವೆ . ಮಕ್ಕಳ ಬೆಳವಣೆಗೆಗೆ ಅಷ್ಟೆ ಅಲ್ಲದೆ , ರೊಗಿಗಳು ಶೀಗ್ರ ಗುಣಮುಖರಾಗಲು, ವಯೊವೃದ್ದರು ಶಕ್ತಿಯನ್ನು ಕಳೆದುಕೊಳ್ಳದಂತಿರಲು, ಹಾಲಿಗಿಂತ ಮಿಗಿಲಾದ ಪೋಷಕ ಪಾನೀಯ ಮತ್ತಾವುದಿಲ್ಲ. ಶಾರೀರಿಕ ಶಕ್ತಿಗೆ ಅತ್ಯಂತ ಪ್ರಮುಕವಾದ ಪೋಷಕ ಪದಾರ್ಥಗಳು ಬಹುಮಟ್ಟಿಗೆ ಹಾಲಿನಲ್ಲೆ ಇರುತ್ತದೆ. ಶ್ವೇತ (ಕ್ಷೀರ ) ಕ್ರಾಂತೀಯ ನಂತರ ನಮ್ಮ ದೇಶವು ಹಾಲಿನ ಉತ್ಪದನೆಯಲ್ಲಿ ಸ್ವಾವಲಂಬನೆಯನ್ನು ಸಾದಿಸಿದೆ.
ಶಕ್ತಿಗಳ ಕುತಂತ್ರದಿ0ದಾಗಿ ಹಾಲು ಕಲಬೆರಕೆಗೊಳಗಾಗುತ್ತಿದೆ. ಆಡಳಿತರೂಡ ಸರ್ಕಾರಗಳು ಕಲಬೆರಕೆಯ ಪಿಡುಗನ್ನು ನಿಯಂತ್ರಿಸಲಾಗುತ್ತಿಲ್ಲ . ಇದೊಂದು ದಾರುಣ ವೈಫಲ್ಯ. ಪ್ರತಿವರ್ಷ ಜೂನ್ ೧- ‘ಪ್ರಪಂಚಹಾಲು ದಿನೋತ್ಸವ’ ದ ಸಂದರ್ಭವಾಗಿ ಸಹಜ ಸಿದ್ದವಾಗಿ ದೊರೆಯುವಂತಹ ಹಾಲು ನಿಸ್ಸಂದೇಹವಾಗಿ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ .
ಶಿಸು ಹಂತದವರೆಗೆ ಮಾತ್ರ ಮಕ್ಕಳು ತಾಯಿಯ ಹಾಲನ್ನು ಅವಲಂಬಿಸಿರುತ್ತಾರೆ . ಆನಂತರ ಮಕ್ಕಳಿಗೆ ಹಸು ಹೆಮ್ಮೆಯ ಹಾಲನ್ನು ರೂಢಿ ಮಾಡಲಾಗುವುದು . ಮೇಕೆ, ಕುರಿ, ಒಂಟೆ , ಕುದುರೆ ಕತ್ತೆಯಂತಹ ಪ್ರಾಣಿಗಳ ಹಾಲು ಕೂಡ ಅಲ್ಲಲ್ಲಿ ಬಳಕೆಯಲ್ಲಿದ್ದರು , ವಿಶ್ವದಾದ್ಯಂತ ಹಸು ,ಎಮ್ಮೆಯ ಹಾಲು ಹೆಚ್ಚು ಉಪಯೋಗವಾಗುತ್ತಿದೆ ,ವಿವಿಧ ರೀತಿಯ ಹಾಲಿನ ಉತ್ಪನ್ನಗಳನ್ನು ಹಸು, ಎಮ್ಮೆಯ ಹಾಲಿನಿಂದಲೇ ಉತ್ಪ್ಪಾದಿಸುತ್ತಾರೆ .
ಹಸುವಿನ ಹಾಲಿನೊಂದಿಗೆ ಹೋಲಿಸಿದರೆ ಎಮ್ಮೆಯ ಹಾಲಿನಲ್ಲಿ ಪ್ರೋಟೀನ್, ಕೊಬ್ಬು ಪದಾರ್ಥ, ಕೆಲವು ವಿಟಮಿನ್ಸ್ ,ಖನಿಜ ಲವಣಾಂಶಗಳು ಸ್ವಲ್ಪ ಹೆಚ್ಚು ಇರುತ್ತದೆ . ಆದರೆ ಹಸುವಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ . ಜೀರ್ಣಶಕ್ತಿ ಕಡಿಮೆ ಇರುವಂತಹವರು ಹಸುವಿನ ಹಾಲನ್ನು ತೆಗೆದುಕೊಳ್ಳುವುದೆ ಒಳ್ಳಯದು. ಅದೇ ರೀತಿ ತಾಯಿ ಹಾಲು ಸಾಕಾಗದ ಮಕ್ಕಳಿಗೆ ಹಸುವಿನ ಹಾಲನ್ನು ಕೊಡುವುದೇ ಉತ್ತಮವೆಂದು ತಜ್ಙರು ಅಭಿಪ್ರಾಯಪಡುತ್ತಾರೆ ಆರೋಗ್ಯದಿಂದ ಇರಲು ಎಲ್ಲಾ ವಯಸ್ಸಿನವರೆಗು ಹಾಲು ತುಂಬಾ ಅವ್ಯಶ್ಯಕ.
ಹಾಲು …..ಪೋಷಕಾಂಶದ ಮೌಲ್ಯ
- ತಾಯಿ ಹಾಲು. ೮೭.೫%
- ಹಸುವಿನ ಹಾಲು .೮೮.೦%
- ಎಮ್ಮೆ ಹಾಲು .೮೪.೦%