ದಾವಣಗೆರೆ ಏ.8 ಆ.ವಿ ಆರೋಗ್ಯ ವಿಜಯ ನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಪತ್ರಿಕೆಯಲ್ಲಿ ರಾಜಕೀಯ ಕ್ರೈಂ ಸುದ್ದಿಗಳ ಜೊತೆಗೆ ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತದೆ. ಒತ್ತಡಕ್ಕೆ ಆರೋಗ್ಯ ವಿಜಯ ಪತ್ರಿಕೆ ನಿಮ್ಮ ಮುಂದೆ ಪ್ರಯತ್ನಿಸಲಿದೆ.
ಆರೊಗ್ಯ ವಿಜಯದಲ್ಲಿ ಆರೋಗ್ಯದ ವಿಷಯವೇ ಪ್ರಧಾನವಾಗಿರಲಿದೆ. ಪಾರಂಪರಿಕ ಆಯುರ್ವೇದದಿಂದ ಇಂದಿನ ಆಧುಕಿನ ಚಿಕಿತ್ಸಾ ಪದ್ದತಿ ಅಲೋಪತಿ ಮನೆಮದ್ದು ಸೇರಿದಂತೆ ಇತರೆ ಚಿಕಿತ್ಸಾ ವಿಧಾನಗಳ ಬಗ್ಗೆ ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಓದುಗರೂ ಸಹ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆರೋಗ್ಯ ವಿಜಯ ಅವಕಾಶ ನೀಡಲಿದೆ.
ಋತುಗಳಿಗೆ ತಕ್ಕಂತೆ ಜನರ ಆರೋಗ್ಯದಲ್ಲಿಯು ಏರುಪೇರುಗಳಾಗುತ್ತವೆ. ಈ ಹಿನ್ನಲೆಯಲ್ಲಿ ಋತುಗಳಿಗೆ ತಕ್ಕಂತೆ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವ ಬಗ್ಗೆ ಪತ್ರಿಕೆ ಮಾಹಿತಿ ನೀಡಲಿದೆ.
ಆಧ್ಯಾತ್ಮದ ಪ್ರವಾಸದ ಜೊತೆಗೆ ಆರೋಗ್ಯ ಪ್ರವಾಸಗಳನ್ನು ಜನರು ಮಾಡುತ್ತಿದ್ದಾರೆ ಅತ್ಯುತ್ತಮ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಉತ್ತಮ ಚಿಕಿತ್ಸಾ ಪದ್ದತಿ ಎಲ್ಲಿ ಯಾವ ವೈದ್ಯರಿಂದ ಸಿಗುತ್ತದೆ ಎಂಬ ಬಗ್ಗೆ ವಿಸ್ತøತ ಮಾಹಿತಿ ಈ ಪತ್ರಿಕೆಯಲ್ಲಿ ಸಿಗಲಿದೆ. ಮಕ್ಕಳು ಮಹಳೆಯರ ಆರೋಗ್ಯ, ಇತರೆ ಮರಣಾಂತಿಕ ರೋಗಗಳು ಮತ್ತು ಚಿಕಿತ್ಸೆಯ ಬಗ್ಗೆ ವಿವರ ಇಲ್ಲಿ ದೊರೆಯಲಿದೆ.
ಜೀವನದಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಕೈಕೊಟ್ಟಾಗಲೇ ಅದರ ಮಹತ್ವ ತಿಳಿಯು
ತ್ತದೆ. ಬಹುತೇಕರು ಹಣ ಮಾಡುವ ಪ್ರಯತ್ನದಲ್ಲಿ ಆರೋಗ್ಯದ ಬಗ್ಗೆ ಚಿಂತಿಸುವುದೇ ಇಲ್ಲ “ಹೇಲ್ತ್ ಇಸ್ ವೇಲ್ತ್” ಎಂಬ ಮಾತಿನಂತೆ ಹಣಕ್ಕಿಂತ ಆರೋಗ್ಯವೇ ಮುಖ್ಯ ಎಂಬುದು ಗೊತ್ತೇ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಆರೋಗ್ಯ ಸಮಾಜ ನಿರ್ಮಾ
ಅನೇಕ ಪೋಷಕರು ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡುವ ಕನಸು ಕಾಣುತ್ತಾರೆ, ಅವರ ಕನಸು ನನಸು ಮಾಡಲು ಆರೋಗ್ಯ ವಿಜಯ ಸಹಕಾರಿಯಾಗಲಿದೆ. ರಾಜ್ಯ, ದೇಶ, ವಿದೇಶದಲ್ಲಿನ ಅತ್ಯುತ್ತಮ ಮೆಡಿಕಲ್ ಕಾಲೇಜುಗಳ ಬಗ್ಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಆರೋಗ್ಯ ವಿಜಯ ವಿವರಿಸಲಿದೆ. ಆಸ್ಪತ್ರೆಗಳ ವಿವರ ಅಲ್ಲಿನ ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಚಿಕಿತ್ಸಾ ವಿಧಾನಗಳ ಬಗ್ಗೆ ಆರೋಗ್ಯ ವಿಜಯ ವಿವರಿಸಲಿದೆ.
ನೈಸರ್ಗಿಕ ಚಿಕಿತ್ಸಾ ವಿಧಾನ ಇತ್ತೀಚೆಗೆ ಹೆಚ್ಚು ಮುನ್ನಲೆಗೆ ಬಂದಿದೆ ಈ ಬಗ್ಗೆಯೂ ಆರೋಗ್ಯ ವಿಜಯ ಬೆಳಕು ಚೆಲ್ಲಲಿದೆ. ರಾಜ್ಯದಲ್ಲಿನ ನೈಸರ್ಗಿಕ ಮತ್ತು ಯೋಗ ಚಿಕಿತ್ಸೆ ನೀಡುವ ಕೇಂದ್ರಗಳ ಬಗ್ಗೆ , ಆಕ್ಯುಪ್ರೆಶರ್ ಚಿಕಿತ್ಸೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಈ ಚಿಕಿತ್ಸೆ ನೀಡುವ ವೈದ್ಯರ ಮಾಹಿತಿ ನೀಡಲಿದ್ದೇವೆ.
ಒಟ್ಟಾರೆ ಆರೋಗ್ಯ ರಕ್ಷಣೆ ನಮ್ಮ ಹೊಣೆ ಎಂಬ ಘೋಷ ವ್ಯಾಕ್ಯದೊಂದಿದೆ ಆರೋಗ್ಯ ವಿಜಯ ಪ್ರತಿ ದಿನ ನಿಮ್ಮ ಕೈ ಸೇರಲಿದೆ ನಿಮ್ಮ ಸಹಕಾರ ಹಾರೈಕೆ ಸದಾ ಇರಲಿ.